ಟೆಕ್ಸಾಸ್‌: ಪ್ರಾಥಮಿಕ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ : 19 ಮಕ್ಕಳು ಸೇರಿ 21 ಮಂದಿ ಸಾವು – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಟೆಕ್ಸಾಸ್‌: ಪ್ರಾಥಮಿಕ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ – 19 ಮಕ್ಕಳು ಸೇರಿ 21 ಮಂದಿ ಸಾವು

ಟೆಕ್ಸಾಸ್‌ : ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ 18 ವರ್ಷದ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 19 ಮಂದಿ ಮಕ್ಕಳು ಹಾಗೂ ಇಬ್ಬರು ವಯಸ್ಕರು ಮೃತಪಟ್ಟಿದ್ದಾರೆ.

ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾದ 18 ವರ್ಷದ ಬಂದೂಕುಧಾರಿಯು ಮಂಗಳವಾರ ರಾಬ್ ಎಲಿಮೆಂಟರಿ ಶಾಲೆಗೆ ನುಗ್ಗಿ ಭೀಕರ ದಾಳಿ ನಡೆಸಿದ್ದಾನೆ. ದಾಳಿಕೋರನು ಸಮೀಪದ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದ್ದ.

2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಅತಿ ಭೀಕರ ದಾಳಿ ಇದಾಗಿದೆ ಎನ್ನಲಾಗಿದೆ.

ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ‌ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಮೂರನೇ ಸುತ್ತಿನ ಅಪ್ಡೇಟ್ಸ್ vishwanews24

ಶಾಲೆಗೆ ತೆರಳುವುದಕ್ಕೂ ಮುನ್ನ ದಾಳಿಕೋರ ಆತನ ಅಜ್ಜಿಯ ಮೇಲೂ ಗುಂಡು ಹಾರಿಸಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆ ಬಳಿಕ ವಾಹನದಲ್ಲಿ ಬಂದು ಕ್ರ್ಯಾಶ್ ಮಾಡಿ ಏಕಾಂಗಿಯಾಗಿ ಗುಂಡಿನ ದಾಳಿ ನಡೆಸಿದ್ದಾನೆ ಈತ ದೇಹಕ್ಕೆ ರಕ್ಷಾಕವಚಧರಿಸಿದ್ದು, ರೈಫಲ್ ಮತ್ತು ಬ್ಯಾಕ್ ಪ್ಯಾಕ್ ಹೊಂದಿದ್ದ. ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೂ ಗುಂಡು ಹಾರಿಸಿದ್ದು, ಪೊಲೀಸರ ಎನ್ ಕೌಂಟರ್ ನಲ್ಲಿ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟೆಕ್ಸಾಸ್ ಶಾಲೆಯ ಗುಂಡಿನ ದಾಳಿಗೆ ಬಲಿಯಾದವರಿಗೆ ಗೌರವಾರ್ಥವಾಗಿ ಶನಿವಾರದವರೆಗೆ ಶ್ವೇತಭವನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಿಸಲಾಗಿದೆ.

ವಿವಾದಿತ ಮಸೀದಿ ದೇಗುಲ ಜಾಗದ ವಿಚಾರವಾಗಿ ಅಂತಿಮ ಸ್ಪರ್ಶ ನೀಡಿದ ತಾಂಬೂಲ ಪ್ರಶ್ನೆ ಚಿಂತಕ ಗೋಪಾಲಕೃಷ್ಣ ಪಣಿಕ್ಕರ್ – Vishwanews24

Leave a Reply