ತಾಜ್‌ ಮಹಲ್‌ನಲ್ಲಿ ಬಾಂಬ್‌ ಇರುವುದಾಗಿ ಕರೆ : ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಪಡೆ -Vishwanews24

Featured, ರಾಷ್ಟ್ರ ನ್ಯೂಸ್

ತಾಜ್‌ ಮಹಲ್‌ನಲ್ಲಿ ಬಾಂಬ್‌ ಇರುವುದಾಗಿ ಕರೆ : ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಪಡೆ -Vishwanews24

ನವದೆಹಲಿ: ಪ್ರೇಮಸೌಧ ತಾಜ್​ ಮಹಲ್​​ನಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ತಾಜ್​ ಮಹಲ್​​ನಲ್ಲಿ ಬಾಂಬ್ ಇಟ್ಟಿರೋದಾಗಿ ಭದ್ರತಾ ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಸಿಬ್ಬಂದಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರವಾಸಿಗರು ಹಾಗೂ ತಾಜ್​ ಮಹಲ್​​ನಲ್ಲಿರುವ ಸಿಬ್ಬಂದಿ ಸೇರಿ ಎಲ್ಲರನ್ನೂ ಹೊರಗಡೆ ಕಳುಹಿಸಿದ್ದಾರೆ.

ಜೊತೆಗೆ ತಾಜ್​ ಮಹಲ್​​ನ ಎಲ್ಲಾ ದ್ವಾರಗಳನ್ನ ಬಂದ್​ ಮಾಡಿ ಬಿಗಿಭದ್ರತೆ ನಿಯೋಜನೆಗೊಂಡಿದೆ. ತನಿಖೆಯನ್ನ ಮುಂದುವರಿಸಿರುವ ಅಧಿಕಾರಿಗಳು, ಓರ್ವ ಯುವಕನನ್ನ ಬಂಧಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ಯೋಗ ಸಿಗದೇ ಖಿನ್ನತೆಗೆ ಒಳಗಾಗಿ ಈ ರೀತಿಯ ಕರೆ ಮಾಡಿದ್ದಾನೆ ಅಂತಾ ಹೇಳಲಾಗಿದೆ. ಆದರೆ ತನಿಖಾಧಿಕಾರಿಗಳು ತನಿಖೆಯನ್ನ ಮುಂದುವರಿಸಿದ್ದಾರೆ.