ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ : ವೀಕೆಂಡ್ ಕರ್ಫ್ಯೂ ತಿಂಗಳಾಂತ್ಯದವರೆಗೆ ವಿಸ್ತರಣೆ – Vishwanews24
ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ: ವೀಕೆಂಡ್ ಕರ್ಫ್ಯೂ ತಿಂಗಳಾಂತ್ಯದವರೆಗೆ ವಿಸ್ತರಣೆ – Vishwanews24
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ನೈಟ್ ಕರ್ಫ್ಯೂ ದಿನಂಪ್ರತಿ ಮುಂದುವರಿಸಲು ತೀರ್ಮಾನಿಸಲಾಗಿದ್ದು ವೀಕೆಂಡ್ ಕರ್ಫ್ಯೂ ತಿಂಗಳಾಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವರು ಹಾಗೂ ತಜ್ಞರ ಜೊತೆ ವರ್ಚುವಲ್ ಸಭೆ ನಡೆಸಿದ್ದಾರೆ.
ಸರಕಾರದ ನಿರ್ಧಾರದ ಪ್ರಕಾರ ರಾಜ್ಯದಾದ್ಯಂತ ಎಲ್ಲಾ ರೀತಿಯ ರ್‍ಯಾಲಿಗಳು, ಧರಣಿಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ.
ಜನವರಿ 31ರವರೆಗೆ ವೀಕೆಂಡ್ ಕರ್ಫ್ಯೂ ಮುಂದುವರಿಕೆಯಾಗಲಿದೆ ಎಂದು ಸರಕಾರ ಹೇಳಿದೆ. ಶಾಲೆಗಳನ್ನು ಮುಚ್ಚುವ ಬಗ್ಗೆ ಕೈಗೊಳ್ಳಬೇಕಾದ ನಿರ್ಧಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಕಾರ್ಕಳ : ಕೋವಿಡ್ ಹಿನ್ನಲೆ ; ಅತ್ತೂರು ಜಾತ್ರೆ ಮುಂದೂಡಿಕೆ – Vishwanews24
ಮದುವೆ ಸಮಾರಂಭಗಳಲ್ಲಿ ಈ ಹಿಂದಿನ ಆದೇಶವನ್ನೇ ಮುಂದುವರಿಸಲಾಗಿದ್ದು, ತೆರೆದ ಸ್ಥಳದಲ್ಲಿ 200 ಮಂದಿ ಹಾಗೂ ಒಳಾಂಗಣದಲ್ಲಿ 100ಜನರು ಭಾಗವಹಿಸಲಷ್ಟೇ ಅವಕಾಶ ಎಂದು ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಗಡಿಗಳಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಥಿಯೇಟರ್, ಬಾರ್‌ಗಳಿಗೆ ಶೇಕಡ 50 ಜನರಿಗೆ ಮಾತ್ರ ಅವಕಾಶವಿರಲಿದ್ದು ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದೇವಸ್ಥಾನಗಳು, ಮಂದಿರ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಪೂಜೆ, ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ.
ಆದರೆ ವೈಕುಂಠ, ಏಕಾದಶಿ ಹಿನ್ನೆಲೆ ಅಂದು ದೇಗುಲಕ್ಕೆ ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶ ಇದ್ದು, ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು.
ಸೇವೆಗಳು ಎಂದಿನಂತೆ ನಡೆದರೂ , ಭಕ್ತರ ಪ್ರವೇಶಕ್ಕೆ ಮಾತ್ರ ಮಿತಿ ಇರಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೋವಿಡ್ 3ನೇ ಅಲೆ ; ರಾಜ್ಯಗಳ ಜೊತೆ ನಾಳೆ ಮೋದಿ ಮಹತ್ವದ ಸಭೆ – Vishwanews24
