ಉಡುಪಿ :ಮಲ್ಪೆಯ ಪಡುಕೆರೆಯಲ್ಲಿ ಮರೀನಾ ಬೀಚ್ : ಪಬ್, ಕ್ಲಬ್, ಹೋಟೆಲ್‌ಗಳು ಆಗಲು ಅವಕಾಶ ಕೊಡುವುದಿಲ್ಲ , ನಗರದ ವಾಸಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು : ಶಾಸಕ ರಘುಪತಿ ಭಟ್ -Vishwanews24

Featured, ಉಡುಪಿ

ಉಡುಪಿ, :ಮಲ್ಪೆಯ ಪಡುಕೆರೆಯಲ್ಲಿ ಮರೀನಾ ಬೀಚ್ : ಪಬ್, ಕ್ಲಬ್, ಹೋಟೆಲ್‌ಗಳು ಆಗಲು ಅವಕಾಶ ಕೊಡುವುದಿಲ್ಲ , ನಗರದ ವಾಸಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು : ಶಾಸಕ ರಘುಪತಿ ಭಟ್ -Vishwanews24

ಉಡುಪಿ, : ಮಲ್ಪೆಯ ಪಡುಕೆರೆಯಲ್ಲಿ ಮರೀನಾ ಬೀಚ್ ಆಗಲು ಬಿಡುವುದಿಲ್ಲ ಎಂದು ಮೀನುಗಾರರು ಮತ್ತು ಸ್ಥಳೀಯರು ಒಕ್ಕೊರಲಿನಿಂದ ಮಂಗಳವಾರ ಉಡುಪಿ ಶಾಸಕ ರಘುಪತಿ ಭಟ್ ಅವರ ಜೊತೆ ನಡೆದ ಮುಖಾಮುಖಿ ಚರ್ಚೆಯಲ್ಲಿ ವಿರೋಧಿಸಿದರು.

ಇತ್ತೀಚೆಗೆ ಪಡುಕೆರೆಯಲ್ಲಿ ಮರೀನಾ ಬೀಚ್ ಆಗದಂತೆ ಮೀನುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ನಡೆದ ಚರ್ಚೆಯಲ್ಲಿ ಶಾಸಕರ ಮನವೊಲಿಸುವ ಪ್ರಯತ್ನ ಕೂಡ ವಿಫಲವಾಯಿತು. ಚರ್ಚೆಯ ನೇತೃತ್ವ ವಹಿಸಿದ್ದ ಪ್ರಕಾಶ್ ಮಲ್ಪೆಯವರು ಒಂಭತ್ತು ಅಂಶಗಳಿರುವ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು.

ಪ್ರತಿ ತಾಲೂಕಿಗೆ ಒಂದರಂತೆ ಗೋಶಾಲೆ ಆರಂಭ :ಸಚಿವ ಪ್ರಭು ಚೌವ್ಹಾಣ್ -Vishwanews24

ತದನಂತರ ಮಾತನಾಡಿದ ಶಾಸಕ ರಘುಪತಿ ‌ಭಟ್, “ಪಡುಕೆರೆ ಯಲ್ಲಿ ಮರೀನಾ ಬೀಚ್ ಮಾಡುವುದು ಕೇವಲ ಪ್ರಸ್ತಾವನೆ ಮಾತ್ರ. ಯಾವ ನಿರ್ದಾರವೂ ಆಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಸಿಡಬ್ಲ್ಯುಪಿಆರ್ ಎಸ್ ನಿಂದ ಒಂದು ಕೋಟಿ ವೆಚ್ಚದಲ್ಲಿ ಅಧ್ಯಯನ ಮಾಡಿ ಸಾಧಕ-ಬಾಧಕಗಳ ಬಗ್ಗೆ ವರದಿ ಸಿದ್ದ ಮಾಡಲು ಮಾತುಕತೆ ನಡೆಸಿದ್ದೇವೆ. ಈ ವರದಿ ಸಿದ್ದವಾಗಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಮೆರೈನ್ ಟೆಕ್ ಸಂಸ್ಥೆ ಯಿಂದ ಈ ಯೋಜನೆ ಮಾಡಲು ಇಯರ್ ಮಾರ್ಕ್ ಮಾಡಿದೆ. ಪಡುಕೆರೆಯ ಶಾಂತಿನಗರದ ವಾಸಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು” ಎಂದು ಭರವಸೆ ನೀಡಿದರು.

ಇತಿಹಾಸವು ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ : ನವಜೋತ್ ಸಿಂಗ್ ಸಿಧು -Vishwanews24

ಅಲ್ಲದೆ “ಮರೀನಾ ಬೀಚ್ ಆದರೂ ಅಲ್ಲಿ ಪಬ್, ಕ್ಲಬ್, ಹೋಟೆಲ್‌ಗಳು ಆಗಲು ಅವಕಾಶ ಕೊಡುವುದಿಲ್ಲ. ಶೋರೂಮ್ಸ್ , ಮನೋರಂಜನಾ ಔಟ್ ಲೆಟ್ ಗಳು ಬರಬಹುದು. ಮೀನುಗಾರಿಕೆಗೆ ಸಮಸ್ಯೆ ಯಾಗುವ, ಸಂಸ್ಕೃತಿಗೆ ದಕ್ಕೆಯಾಗುವ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ಬಾರಿ ತಜ್ಞರ ವರದಿ ಬಂದರೆ, ಇಲ್ಲಿಗೆ ಅವರನ್ನು ಕರೆತಂದು ಮುಖಾಮುಖಿ ಚರ್ಚೆ ಮಾಡಲು ಸೂಚಿಸುತ್ತೇನೆ. ಮೀನುಗಾರಿಕಾ ಆಂತರಿಕ ಸಮಸ್ಯೆ ಬಗ್ಗೆ ಸ್ಪಷ್ಟವಾದ ಅರಿವಿಲ್ಲ. ಆಂತರಿಕ ಮತ್ತು ಅಂತಾರಾಷ್ಟ್ರೀಯ ಬೋಟ್ ನಿಲುಗಡೆ ವ್ಯವಸ್ಥೆ ಬೇರೆಯೇ ಇದೆ. ಅವೆಲ್ಲವನ್ನೂ ವರದಿ ಬಂದ ಮೇಲೆಯೇ ಕೂಲಂಕಷವಾಗಿ ಅಧ್ಯಯನ ಮಾಡಿದ ಮೇಲೆ ನಿರ್ಧಾರ ಮಾಡಲಾಗುತ್ತದೆ” ಎಂದು ಶಾಸಕ ಭಟ್ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನ ಅಧ್ಯಕ್ಷ ದಿನಕರ್ ಬಾಬು, ತಾಲೂಕು ಪಂಚಾಯತ್ ನ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಪಂಡರಿನಾಥ್ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶಿವರಾಜ್ ಪುತ್ರನ್ ಉಪಸ್ಥಿತರಿದ್ದರು.

ಏಪ್ರಿಲ್ 1ರಿಂದ ಪಡಿತರದಾರರಿಗೆ ಅಕ್ಕಿ ಜೊತೆಗೆ ಜೋಳ, ತೊಗರಿ, ರಾಗಿ ವಿತರಣೆ -Vishwanews24