ಕೆಪಿಎಸ್‌ಸಿ ವಿಚಾರವಾಗಿ ಬಿಜೆಪಿ ಪಾದಯಾತ್ರೆ ಅವರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಮುಚ್ಚಿಹಾಕುವ ಯತ್ನ :  ಸಿಎಂ ಡಿ.ಕೆ.ಶಿ -vishwanews24

Featured, ರಾಜ್ಯ ನ್ಯೂಸ್

ಕೆಪಿಎಸ್‌ಸಿ ವಿಚಾರವಾಗಿ ಬಿಜೆಪಿ ಪಾದಯಾತ್ರೆ ಅವರ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಮುಚ್ಚಿಹಾಕುವ ಯತ್ನ :  ಸಿಎಂ ಡಿ.ಕೆ.ಶಿ

ಬೆಂಗಳೂರು : ಕೆಪಿಎಸ್‌ಸಿ ವಿಚಾರವಾಗಿ ಬಿಜೆಪಿ ನಾಯಕರು ನಡೆಸುತ್ತಿರುವ ಪಾದಯಾತ್ರೆಯು, ಅವರ ಪಕ್ಷದಲ್ಲಿನ ತೀವ್ರ ಆಂತರಿಕ ಬಿಕ್ಕಟ್ಟನ್ನು ಮುಚ್ಚಿಹಾಕಲು ನಡೆಸುತ್ತಿರುವ ವ್ಯರ್ಥ ಪ್ರಯತ್ನ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಪಿಎಸ್‌ಸಿ ಅಕ್ರಮಗಳಲ್ಲಿ ಸ್ವತಃ ಬಿಜೆಪಿ ನಾಯಕರ ಸಂಪರ್ಕವೇ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಪಿಎಸ್‌ಸಿ ಅಕ್ರಮ ಹಾಗೂ ಹಗರಣಗಳ ನಿಜವಾದ ‘ಪಿತಾಮಹ’ ಎನ್‌ಡಿಎ ಮೈತ್ರಿಕೂಟ” ಎಂದು ಆರೋಪಿಸಿದರು.

“ಪ್ರಸ್ತುತ ಇರುವ ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರ. ಹೀಗಾಗಿ ಅವರೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದವರು ಯಾರು ಎಂಬ ಬಗ್ಗೆ ಸಂಪೂರ್ಣ ಪರಿಶೀಲನೆ ಹಾಗೂ ತನಿಖೆ ನಡೆಸಬೇಕಿದೆ” ಎಂದು ಹೇಳಿದರು.

Leave a Reply