ಫೆ.20ರಂದು ರವಿಶಂಕರ್ ಗುರೂಜಿ ಕಾಪುವಿಗೆ – ಕಡಲ ಕಿನಾರೆಯಲ್ಲಿ ಗುರೂಜಿಯಿಂದ ಆನಂದಲಹರಿ ಮಹಾ ಸತ್ಸಂಗ : ಗುರ್ಮೆ ಸುರೇಶ್ ಶೆಟ್ಟಿ – vishwanews24
ಫೆ.20ರಂದು ರವಿಶಂಕರ್ ಗುರೂಜಿ ಕಾಪುವಿಗೆ
ಕಾಪುವಿನ ಶಾಂತ ಕಡಲ ಕಿನಾರೆಯಲ್ಲಿ ರವಿಶಂಕರ ಗುರೂಜಿಯಿಂದ ಆನಂದಲಹರಿ ಮಹಾ ಸತ್ಸಂಗ ..
ಹದಿನೈದು ಸಾವಿರಕ್ಕೂ ಅಧಿಕಮಂದಿ ಭಾಗವಹಿಸುವ ನಿರೀಕ್ಷೆ: ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ (Vishwanews24): ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುಮೆ ಸುರೇಶ್ ಶೆಟ್ಟಿ ಹಾಗೂ ಸಹೋದರರು ಮತ್ತು ಆರ್ಟ್ ಆಫ್ ಲಿವಿಂಗ್ ನ ಬಂಧುಗಳು ಆಯೋಜಿಸಿರುವ ಮಾನವತಾವಾದಿ ಹಾಗೂ ಶಾಂತಿದೂತ ಎನ್ನುವ ಹೆಸರಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಜೀವನ ಕಲಾ ಸಂಸ್ಥೆಯ ಸ್ಥಾಪಕ ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಂದ ಆನಂದಲಹರಿ ಎಂಬ ಮಹಾಸತ್ಸಂಗ ಕಾರ್ಯಕ್ರಮ ಮಂಥನ ರೆಸಾರ್ಟ್ ಬಳಿ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಾಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಗುರೂಜಿ ಅವರು ಜ್ಞಾನ ಧ್ಯಾನ ಹಾಗೂ ಗಾನದ ಸವಿಯನ್ನು ನೀಡುತ್ತಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯವಾಗಿದೆಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಸುಮಾರು 500 ವರ್ಷಗಳಿಂದ ಯಾವುದೇ ರೀತಿಯ ಪರಿಹಾರವನ್ನು ಕಾಣದಿರುವ ಅಯೋಗ್ಯ ಎಂಬ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ಪೂಜ್ಯ ಗುರುದೇವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂಬುದು ತಿಳಿದಿದೆ.
ಕೌಟುಂಬಿಕ ಸಮಸ್ಯೆ ಮಾನಸಿಕ ಒತ್ತಡ ಆರ್ಥಿಕ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಜನರು ಮಾನಸಿಕವಾಗಿ ಕುಗ್ಗುತ್ತಿದ್ದು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಆತ್ಮಹತ್ಯೆ ಪತಿ ಪತ್ನಿ ಕಲಹ ಕೊಲೆ ದಾಯಾಧಿಕಲಹ, ದುರಭ್ಯಾಸ ದುಶ್ಚಟತನಕ್ಕೆ ದಾಸರಾಗುತ್ತಿರುವುದು ಗಮನಿಸಿದ್ದೇನೆ ಇದಕ್ಕೆಲ್ಲ ಸಮಾಧಾನ ಅಥವಾ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಆನಂದಲಹರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮವು 20ನೇ ಫೆಬ್ರವರಿ ಮಂಗಳವಾರದಂದು ಸಂಜೆ 5:00ಗೆ ನಡೆಯಲಿದ್ದು ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಆರ್ಟ್ ಆಫ್ ಲಿವಿಂಗ್ನ ಆಡಳಿತ ಮಂಡಳಿ ಸದಸ್ಯ ದಿನೇಶ್ ಕಾಮತ್, ರಾಜ್ಯ ಸಂಯೋಜಕ ವಸಂತ್ ಕುಮಾರ್, ಶಿಕ್ಷಕರಾದ ರಾಧಾ ಶೆಣೈ, ಪ್ರಶಾಂತ್ ಪೈ, ವಿಮಲಾಕ್ಷಿ ದಿವಾಕರ್, ಶೈಲಜಾ, ಕಾರ್ಯಕ್ರಮ ಸಂಯೋಜಕರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.
