ಉಡುಪಿ

ಮರವಂತೆ ಬೀಚ್ ಪ್ರಮುಖ ಪ್ರವಾಸಿ ಕೇಂದ್ರವಾಗಿಸಲು ಯೋಜನೆ

ಉಡುಪಿ : ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮರವಂತೆ ಬೀಚ್ ಅಭಿವೃದ್ಧಿಗೊಳಿಸುವ ಸಲುವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಈ ಪ್ರಕೃತಿ ರಮಣೀಯ ಸ್ಥಳದಲ್ಲಿ ಒಂದು ಕಡೆಯಿಂದ ರಮ್ಯ ಮನೋಹರ ಅರಬ್ಬೀ ಸಾಗರ ಹಾಗೂ ಇನ್ನೊಂದು ಕಡೆಯಿಂದ ಮನಮೋಹಕ ಸೌಪರ್ಣಿಕಾ ನದಿಯನ್ನು ನೋಡುವುದು ಕಣ್ಣಿಗೆ ಒಂದು ಹಬ್ಬ. ಈ ಸ್ಥಳವನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿಸುವ ಯೋಜನೆಯನ್ನು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ.

ಮರವಂತೆ-ತ್ರಾಸಿ ಪ್ರದೇಶವನ್ನು ಮೆರೈನ್ ಡ್ರೈವ್ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಯೋಚನೆಯಿದೆ. ಇಲ್ಲಿ ನೆಲಕ್ಕೆ ಇಂಟರ್ ಲಾಕ್ ಅಳವಡಿಸಿ ಗ್ರಾನೈಟ್ ಬೆಂಚುಗಳನ್ನೂ ಅಳವಡಿಸಿ ಪ್ರವಾಸಿಗರಿಗೆ ಈ ಸ್ಥಳದ ಸೌಂದರ್ಯವನ್ನು ಆಸ್ವಾದಿಸಲು ಅವಕಾಶವೊದಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ ಆರ್ ತಿಳಿಸಿದ್ದಾರೆ.

ಮರವಂತೆ ಬೀಚಿಗೆ ಸಮೀಪದಲ್ಲಿ ಇಲಾಖೆಯ 1.10 ಎಕರೆ ಪ್ರದೇಶವಿದ್ದು ಇಲ್ಲಿ ಪಾರ್ಕ್ ಸ್ಥಾಪಿಸಲಾಗುವುದಲ್ಲದೆ ಕೋಸ್ಟಲ್ ಸರ್ಕಿಟ್ ಯೋಜನೆಯನ್ವಯ ಪ್ರವಾಸಿಗರಿಗೆ ರೂ 1.36 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನೂ ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ ಕರ್ನಾಟಕ ಗ್ರಾಮೀಣ ಮೂಲಭೂತಸೌಕರ್ಯ ಅಭಿವೃದ್ಧಿ ನಿಯಮಿತ ಆರ್ಥಿಕ ನೆರವು ಬಿಡುಗಡೆಗೊಳಿಸಿದೆ. ಜೀವರಕ್ಷಕರನ್ನು ಹೊಂದಿರುವ ವಾಚ್ ಟವರ್ ಒಂದನ್ನೂ ಸ್ಥಾಪಿಸಲಾಗುವುದು. ಆಹಾರದ ಮಳಿಗೆಗಳನ್ನೂ ತೆರೆಯುವ ಯೋಚನೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆದ್ದಾರಿಯ ಇನ್ನೊಂದು ಭಾಗದಲ್ಲಿ ಸೌಪರ್ಣಿಕಾ ನದಿ ದಂಡೆ ಸಮೀಪ ಸರಕಾರದ 13.12 ಎಕ್ರೆ ಭೂಮಿಯಿದ್ದು ಇಲ್ಲಿ ಪ್ರವಾಸಿ ಮಾಹಿತಿ ಕೇಂದ್ರ, ಫುಡ್ ಕೋರ್ಟ್ ಮತ್ತಿರ ಸೌಲಭ್ಯಗಳು ರೂ 6 ಕೋಟಿ ವೆಚ್ಚದಲ್ಲಿ ತಲೆಯೆತ್ತಲಿವೆ.

ಕೇಂದ್ರ ಸರಕಾರದ ಸ್ವದೇಶ್ ದರ್ಶನ್ ಯೋಜನೆಯನ್ವಯ ಜಲಕ್ರೀಡೆಗಳಿಗಾಗಿಯೂ ರೂ 1.84 ಕೋಟಿ ಒದಗಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳೊಳಗಾಗಿ ಹೌಸ್ ಬೋಟ್ ಹಾಗೂ ತೇಲುವ ರೆಸ್ಟಾರೆಂಟ್ ಕೂಡ ಆರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

Vishwa News 24

Recent Posts

ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ – vishwanews24

ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ  ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ ಮಂಗಳೂರು: ಮುಂಬರುವ ಬಕ್ರೀದ್…

54 seconds ago

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! vishwanews24

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! ಬೆಂಗಳೂರು : ಮೂರು ವರ್ಷಗಳಿಂದ ರಾಜ್ಯವನ್ನು ಆಳಿದ ಸಿದ್ದರಾಮಯ್ಯ ಆಳ್ವಿಕೆ…

8 minutes ago

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

18 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

22 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

22 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

23 hours ago